MODEL QUESTION PAPER –State – 8th Second language – 2026
Time : 3 Hours
Maximum Marks : 80
I. ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. (5 × 1 = 5)
- ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ.
a) 13 b) 9 c) 34 d) 25 - ‘ಹೊಂಚುಹಾಕು’ ಎಂಬ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ.
a) ಅನುಕರಣಾವ್ಯಯ b) ದ್ವಿರುಕ್ತಿ c) ನುಡಿಗಟ್ಟು d) ಜೋಡುನುಡಿ - ‘ತ್ರಿಪದಿ’ ಪದದ ತದ್ಭವ ರೂಪ.
a) ಮೂರುಸಾಲು b) ತಿವದಿ c) ವಸತಿ d) ತ್ರಿವದಿ - ಲೋಪ ಸಂಧಿಗೆ ಉದಾಹರಣೆಯಾಗಿರುವ ಪದ.
a) ಗುರುವನ್ನು b) ಬೆಟ್ಟದಾವರೆ c) ಮಾತಿಲ್ಲ d) ಕೈಯಲ್ಲಿ - ‘ಗುರುವಿಂದ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ.
a) ಸಪ್ತಮಿ ವಿಭಕ್ತಿ b) ದ್ವಿತೀಯ ವಿಭಕ್ತಿ c) ತೃತೀಯ ವಿಭಕ್ತಿ d) ಚತುರ್ಥಿ ವಿಭಕ್ತಿ
II. ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (12 × 1 = 12)
- ಬುದ್ಧನ ಪ್ರಕಾರ ನದಿ ನೀರಿಗಿಂತ ಹೆಚ್ಚು ಬೆಲೆಯುಳ್ಳದ್ದು ಯಾವುದು?
- ಬಣ್ಣ ಬಣ್ಣದ ಹಕ್ಕಿಗಳು ಏಕೆ ಉಲಿಯುತ್ತಿದ್ದವು?
- ಮಹಾತ್ಮ ಗಾಂಧೀಜಿಯವರ ಆತ್ಮಕಥೆಯ ಹೆಸರೇನು?
- ಸುಕ್ರಿಯವರು ಯಾವ ಒಕ್ಕಲು ಜನಾಂಗಕ್ಕೆ ಸೇರಿದ ಮಹಿಳೆ?
- ನಂದನ ಮತ್ತು ಬಂಧನ ಎಂದರೇನು? ಅವು ಎಲ್ಲಿವೆ?
- ಜಗದ ನಿಯಮ ಯಾವುದು?
- ಅಂತರ್ಜಲ ಹೇಗೆ ಕಲುಷಿತವಾಗುತ್ತಿದೆ?
- ಭಾರತ ಮತ್ತು ಅಮೆರಿಕೆಯ ಸಂಸ್ಕೃತಿಗಳಿಗೆ ಎಷ್ಟು ವರ್ಷಗಳ ಇತಿಹಾಸವಿದೆ?
- ತಾರಾನಾಥರು ಆಶ್ರಮವನ್ನು ಏಕೆ ಕಟ್ಟಿದರು?
- ಅಶೋಕನು ಪ್ರತಿಪಾದಿಸಿದ ಧರ್ಮ ಯಾವುದು?
- ಎಂಜಲು ತೊಳೆದವರಿಗೆ ಏನು ಸಿಗಬೇಕಾಗಿತ್ತು?
- ಬಸವಣ್ಣನವರ ವಚನಗಳ ಅಂಕಿತನಾಮವೇನು?
III. ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ. (8 × 2 = 16)
- ಕಲಾಂ ಅವರಿಗೆ ನಿದ್ದೆಯಲ್ಲಿ ಯಾವ ಯಾವ ಯೋಚನೆಗಳು ಸುಳಿದಾಡಿದವು?
- ಗಾಂಧೀಜಿಯವರ ಬಾಲ್ಯದಲ್ಲಿದ್ದ ಸ್ವಭಾವಗಳಾವುವು?
- ಕವಿ ಹೇಳುವಂತೆ ಬದುಕಿನಲ್ಲಿ ಯಾವುದು ಕಷ್ಟ? ಅದನ್ನು ಪಡೆಯುವುದು ಹೇಗೆ?
- ವರದಿಯ ಪ್ರಕಾರ ಕೋಲಾದಲ್ಲಿ ಕೀಟನಾಶಕ ಹೇಗೆ ಬಂತು?
- ಗಣೇಕಲ್ ಶಿವಯ್ಯನವರು ಕಳ್ಳರನ್ನು ಏನೆಂದು ಕೇಳಿಕೊಂಡರು?
- ತೃಣದ ಹಸಿರಿಗೆ ಕಾರಣವಾದ ಅಂಶಗಳಾವುವು?
- ವಿಶ್ವೇಶ್ವರಯ್ಯನವರ ವ್ಯಕ್ತಿತ್ವದ ವಿಶೇಷತೆಗಳೇನು?
- ಮಳೆ ಯಾವ ಯಾವ ನಷ್ಟಗಳನ್ನು ಉಂಟು ಮಾಡದಿರಲಿ ಎಂದು ಕವಯಿತ್ರಿ ಆಶಿಸಿದ್ದಾರೆ?
IV. ಕವಿ / ಸಾಹಿತಿಯ ಪರಿಚಯ ಬರೆಯಿರಿ. (1 × 3 = 3)
- ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪರಿಚಯವನ್ನು ಬರೆಯಿರಿ.
V. ಕೆಳಗಿನ ಪದ್ಯದ ಸಾರಾಂಶ ಬರೆಯಿರಿ. (1 × 3 = 3)
- ಗೆದ್ದ ರಾಜ್ಯ ಮರಳಿಸುತ್ತ ನುಡಿದನೊಂದು ಮಾತನು
ನೀನು ಸೋತುಗೆದ್ದೆ ಅಣ್ಣ, ನಾನು ಗೆದ್ದು ಸೋತೆನು
ಬೆಟ್ಟ ಕರೆಯುತಿಹುದು ನನ್ನ ಮುಗಿಲು ತನ್ನ ಹತ್ತಿರ
ಯಾವುದುಂಟು ಅಣ್ಣ ಇಲ್ಲಿ ಜೀವವೇರದೆತ್ತರ?
ತಪಸ್ಸೊಂದೆ ತಿಳಿವುದೊಂದೆ ಹುಟ್ಟು ಸಾವಿನುತ್ತರ.
VI. ಗಾದೆ ಮಾತನ್ನು ವಿಸ್ತರಿಸಿ ಬರೆಯಿರಿ. (1 × 3 = 3)
- “ದುಡಿಮೆಯೇ ದುಡ್ಡಿನ ತಾಯಿ.”
ಅಥವಾ
“ಅರಮನೆಗಿಂತ ನೆರೆಮನೆ ಲೇಸು.”
VII. ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ. (6 × 3 = 18)
- “ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ.”
- “ಚಳುವಳಿಗಾರರಿಗೆ ಆನೆಬಲ ಬರುತ್ತದೆ.”
- “ಜ್ಯೋತಿಯೇ ಆಗು ಜಗಕೆಲ್ಲ.”
- “ಸುಮ್ಮನೆ ದೂರಬೇಡಿ, ಏನಾದರೂ ಮಾಡಿ.”
- “ಮರದ ಬುಡದಲ್ಲಿ ಶುಭಾಶಯ ಪತ್ರಗಳನ್ನಿಡುತ್ತಿದ್ದಾರೆ.”
- “ಕಮರುವ ಬಣ್ಣದ ಕನಸುಗಳು.”
VIII. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಬರೆಯಿರಿ. (1 × 4 = 4)
- ಗೌರವಿಸು …………………………………
……………………………………………
……………………………………………
…………………………… – ಮಂಕುತಿಮ್ಮ
ಅಥವಾ
ಒಮ್ಮೆ ……………………………………
……………………………………………
……………………………………………
…………………………… – ಮಂಕುತಿಮ್ಮ
IX. ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ. (1 × 4 = 4)
- ಅಂಗಳವೆಂಬುದು ಲೇಖಕರ ಬಾಲ್ಯದ ನೆನಪುಗಳೊಂದಿಗೆ ಹೇಗೆ ಬೆಸೆದುಕೊಂಡಿದೆ?
ಅಥವಾ
ಅಂಗಳವು ಈಗಿನ ದಿನಗಳಲ್ಲಿ ಹೇಗೆ ಬದಲಾಗಿದೆ?
X. ಕೆಳಗಿನ ಗದ್ಯಭಾಗವನ್ನು ಓದಿ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. (2 × 2 = 4)
ಭಾರತವು ಪ್ರಾಚೀನ ಸಂಸ್ಕೃತಿ ಮತ್ತು ಸಮೃದ್ಧ ಪರಂಪರೆಯನ್ನು ಹೊಂದಿರುವ ಮಹಾನ್ ದೇಶವಾಗಿದೆ. ಈ ದೇಶದಲ್ಲಿ ಹಲವು ಭಾಷೆಗಳು, ಧರ್ಮಗಳು ಮತ್ತು ಸಂಪ್ರದಾಯಗಳು ಕಂಡುಬರುತ್ತವೆ. ಆದರೂ ಭಾರತೀಯರು ಪರಸ್ಪರ ಸಹೋದರತ್ವ ಮತ್ತು ಸಹಕಾರದ ಮನೋಭಾವದಿಂದ ಬದುಕುತ್ತಿದ್ದಾರೆ. ಭಾರತದ ಗ್ರಾಮಗಳು ದೇಶದ ನಿಜವಾದ ಆಧಾರವಾಗಿವೆ. ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿಕೊಂಡು ತಮ್ಮ ಜೀವನವನ್ನು ನಡೆಸುತ್ತಾರೆ. ರೈತರು ಭೂಮಿಯನ್ನು ಉಳಿ ಬೆಳೆ ಬೆಳೆಸಿ ದೇಶದ ಜನರಿಗೆ ಅನ್ನವನ್ನು ಒದಗಿಸುತ್ತಾರೆ. ಆದ್ದರಿಂದ ರೈತರನ್ನು ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆಯ ಕೊರತೆ, ನೀರಿನ ಅಭಾವ, ಗೊಬ್ಬರಗಳ ಹೆಚ್ಚಿದ ಬೆಲೆ, ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿರುವುದು ಮುಂತಾದ ಸಮಸ್ಯೆಗಳು ರೈತರ ಜೀವನವನ್ನು ಕಷ್ಟಕರವಾಗಿಸುತ್ತಿವೆ. ಕೆಲವೊಮ್ಮೆ ಪ್ರವಾಹ, ಬರ, ಚಂಡಮಾರುತಗಳಂತಹ ಪ್ರಕೃತಿ ವಿಕೋಪಗಳು ರೈತರ ಪರಿಶ್ರಮವನ್ನು ಹಾಳು ಮಾಡುತ್ತವೆ. ಆದ್ದರಿಂದ ರೈತರ ಅಭಿವೃದ್ಧಿಗಾಗಿ ಸರ್ಕಾರ ಮತ್ತು ಸಮಾಜ ಇಬ್ಬರೂ ಸಹಕರಿಸುವುದು ಅಗತ್ಯವಾಗಿದೆ. ರೈತರು ಸುಖವಾಗಿದ್ದರೆ ದೇಶವೂ ಸುಖವಾಗಿರುತ್ತದೆ.
ಪ್ರಶ್ನೆಗಳು :
- ರೈತರು ಎದುರಿಸುತ್ತಿರುವ ಎರಡು ಸಮಸ್ಯೆಗಳನ್ನು ಬರೆಯಿರಿ.
- ರೈತರನ್ನು ಏಕೆ ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ ಏಕೆ ?
XI. ಪ್ರಬಂಧ ಬರೆಯಿರಿ. (1 × 4 = 4)
- ತ್ಯಾಜ್ಯವಸ್ತು ನಿರ್ವಹಣೆ
ಅಥವಾ
ಮಹಿಳಾ ಸಬಲೀಕರಣ
XII. ಪತ್ರ ಬರೆಯಿರಿ. (1 × 4 = 4)
- ಮಂಡ್ಯದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಮಮತ / ಮನ್ವಿತ್ ಎಂದು ಭಾವಿಸಿಕೊಂಡು, ನಿಮ್ಮ ಶಾಲೆಗೆ ಅಗತ್ಯವಾಗಿರುವ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವಂತೆ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಪತ್ರ ಬರೆಯಿರಿ.
ಅಥವಾ
ದಾಂಡೇಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಗಗನ್ ಎಂದು ಭಾವಿಸಿಕೊಂಡು, ಪೋಷಕರ ಸಭೆಗೆ ಆಹ್ವಾನಿಸಿ ಹುಬ್ಬಳ್ಳಿಯ ಅಂಬೇಡ್ಕರ್ ಬಡಾವಣೆಯಲ್ಲಿ ವಾಸವಾಗಿರುವ ‘ಸುದರ್ಶನ’ ಎಂಬ ನಿಮ್ಮ ತಂದೆಯವರಿಗೆ ಪತ್ರ ಬರೆಯಿರಿ.