Telegram Join My Telegram WhatsApp Join My WhatsApp

MODEL QUESTION PAPER – 2026-IX – II Language Kannada – Question Paper

MODEL QUESTION PAPER – 2026  – IX – II Language Kannada – Question Paper
Time : 3 Hours  Max Marks : 80

I. ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ.                                                                                                        4 × 1 = 4
  1. ಹ್ರಸ್ವಸ್ವರಗಳಿಗೆ ಉದಾಹರಣೆಗಳಾಗಿರುವ ಅಕ್ಷರಗಳಿವು.
    a) ಏ, ಐ, ಓ, ಔ
    b) ಕ, ಚ, ಟ, ಪ
    c) ಅ, ಇ, ಎ, ಒ
    d) ಞ, ಣ, ನ, ಮ
  2. ‘ಪ್ರದೇಶದಲ್ಲಿ’ ಈ ಪದದಲ್ಲಿರುವ ವಿಭಕ್ತಿಯ ಹೆಸರು.
    a) ತೃತೀಯ
    b) ಚತುರ್ಥೀ
    c) ದ್ವಿತೀಯಾ
    d) ಸಪ್ತಮಿ
  3. ವರ್ತಮಾನ ಕಾಲವನ್ನು ಸೂಚಿಸುವ ಪದ.
    a) ಬರೆಯುವನು
    b) ಬರೆಯುತ್ತಿದ್ದಾನೆ
    c) ಬರೆಯಿತು
    d) ಬರೆದನು
  4. ಆದೇಶ ಸಂಧಿಗೆ ಉದಾಹರಣೆಯಾದ ಪದ.
    a) ಹೂದೋಟ
    b) ಊರೂರು
    c) ಶಾಲೆಯನ್ನು
    d) ದೇವಾಲಯ
II. ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

                                                                                                                                          12 × 1 = 12

  1. ಕುವೆಂಪು ಅವರ ಮಕ್ಕಳು ಭಿಕ್ಷುಕನೆಂದು ಭಾವಿಸಿದ ಕವಿಯ ಹೆಸರೇನು?
  2. ಬಿ.ಜಿ.ಎಲ್ ಸ್ವಾಮಿಯವರ ಪೂರ್ಣ ಹೆಸರೇನು?
  3. ಜೇನು ಕುರುಬರ ಗೀತಾಳ ಮಗನೊಬ್ಬ ಸಾಹುಕಾರರ ಅಂಗಡಿಗೆ ಏಕೆ ಹೋಗುತ್ತಿದ್ದನು?
  4. ದೂರದ ಬೆಟ್ಟ ಹೇಗೆ ಕಾಣುತ್ತದೆ?
  5. ಶಬರಿಗೆ ಶ್ರೀರಾಮನು ಹೇಗೆ ಕಂಡನು?
  6. ಹೊಳೆ, ಅಲೆ ಹಾಗೂ ಗಾಳಿ ಹೇಗೆ ನಾದಗೈಯುತ್ತವೆ?
  7. ಜಗವನ್ನು ಮೋಹಿಸಿದ ನಾದ ಯಾವುದು?
  8. ಉರುಸುಗಳು ಯಾವುದರ ಹೆಗ್ಗುರುತು?
  9. ಯಾವ ಕವಿಯನ್ನು ಡಿ.ಎಲ್.ಎನ್ ಅವರು ಮೆಚ್ಚಿದ್ದರು?
  10. ಧಾರ್ಮಿಕ ವ್ಯಕ್ತಿಗಳು ಐನ್‌ಸ್ಟೀನ್ ಅವರನ್ನು ಏನೆಂದು ಪರಿಭಾವಿಸುತ್ತಾರೆ?
  11. ಭೀಷ್ಮನ ಪೂರ್ವದ ಹೆಸರೇನು?
  12. ಬಸ್ ಕಂಡಕ್ಟರ್ ಸ್ತ್ರೀ ಪ್ಯಾಸೆಂಜರ್ ಜೊತೆ ಏನೆಂದು ಚರ್ಚಿಸುತ್ತಾನೆ?
III. ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

                                                                                                                                            8 × 2 = 16

  1. ಕವಿತೆಯ ಜೊತೆಗೆ ಕವಿಯ ಹೆಸರನ್ನೂ ಏಕೆ ನೆನಪಲ್ಲಿಡಬೇಕು?
  2. ಗೀತಾ ಅಮ್ಮಾಳಮ್ಮನಲ್ಲಿ ಆನೆ ಶಿವನ ಬಗ್ಗೆ ಏನೆಂದು ಬೇಡಿಕೊಂಡಿದ್ದಳು?
  3. ‘ಬೆಟ್ಟ ಹತ್ತ ಬೇಡ’ ಕವಿತೆಯಲ್ಲಿ ಮಗುವಿನ ಸಂಕಲ್ಪವೇನು?
  4. ರಾಮ ಬಳಿಯಲ್ಲಿ ಕೂತಾಗ ಶಬರಿ ಹೇಗೆ ಸಂಭ್ರಮಿಸಿದಳು?
  5. ಕುವೆಂಪು ಅವರ ಪಂಚ ಮಂತ್ರಗಳಾವುವು?
  6. ಹೊಳೆಯ ಬದಿ ಯಾರೆಲ್ಲ ಸೇರಿದರು?
  7. ತೀ.ನಂ.ಶ್ರೀ ಅವರು ಡಿ.ಎಲ್.ಎನ್ ಅವರ ಬಗ್ಗೆ ಏನು ಹೇಳಿದ್ದಾರೆ?
  8. ಜಲಮಾಲಿನ್ಯ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳೇನು?
IV. ಕೆಳಗಿನ ಕವಿ / ಸಾಹಿತಿಯ ಜನ್ಮಸ್ಥಳ, ಕಾಲ, ಕೃತಿ ಮತ್ತು ಬಿರುದು / ಪ್ರಶಸ್ತಿಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ.                                                                 1 × 3 = 3
  1. ಕುವೆಂಪು
V. ಕೆಳಗಿನ ಪದ್ಯದ ಸಾರಾಂಶವನ್ನು ವಾಕ್ಯರೂಪದಲ್ಲಿ ಬರೆಯಿರಿ.                       1 × 3 = 3
  1.   ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ,

ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ.
ನಿಮ್ಮ ಶರಣರ ಸೂಳ್ನುಡಿಯ ಒಂದರ ಘಳಿಗೆಯಿತ್ತಡೆ
ನಿನ್ನನಿತ್ತೆ ಕಾಣಾ! ರಾಮನಾಥ.

VI. ಕೆಳಗೆ ಕೊಟ್ಟಿರುವ ಗಾದೆ ಮಾತುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಂಡು ವಿಸ್ತರಿಸಿ ಬರೆಯಿರಿ.                                                                                           1 × 3 = 3
  1.    “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.”

ಅಥವಾ

“ದೇಶ ಸೇವೆಯೇ ಈಶ ಸೇವೆ.”

VII. ಕೆಳಗಿನ ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯಗಳನ್ನು ಬರೆಯಿರಿ.

                                                                                                                                         6 × 3 = 18

  1. “ಅಶ್ವತ್ಥ ಬರಿಯ ಮರವಲ್ಲ.”
  2. “ಕರ್ನಾಟಕದ ಬಗ್ಗೆ ನಿಮ್ಮ ಅಭಿಪ್ರಾಯವೇನು?”
  3. “ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಂ ಎಂದು ಬಿಟ್ಟ ಮಾರ.”
  4. “ತಿಟ್ಹತ್ತಿ ತಿರುಗಿ ನೋಡ್ಯಾಳ.”
  5. “ಚಿನ್ನಕ್ಕೆ ಕುಂದಣ ಕೂಡಿಸಿದಂತಾಗುತ್ತದೆ.”
  6. “ಧರ್ಮವಿಲ್ಲದ ವಿಜ್ಞಾನ ಕುಂಟು ಮತ್ತು ವಿಜ್ಞಾನವಿಲ್ಲದ ಧರ್ಮ ಕುರುಡು.”
VIII. ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಿಸಿ ಬರೆಯಿರಿ.                               1 × 4 = 4
  1.   ಆಚಾರವಿಲ್ಲದ …………………………

………………………………………………………
………………………………………………………
……………………………………………………… ನಾಲಗೆ

ಅಥವಾ

ಇದ್ದ ಮಾತನಾಡು ………………………………
………………………………………………………
………………………………………………………
……………………………………………………… ನಾಲಗೆ

IX. ಕೆಳಗಿನ ಪ್ರಶ್ನೆಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.         1 × 4 = 4
  1. ಶಂತನುವಿಗೆ ಒದಗಿಬಂದ ಚಿಂತೆಯನ್ನು ಭೀಷ್ಮನು ಹೇಗೆ ಪರಿಹರಿಸಿದನು?

ಅಥವಾ

ಭೀಷ್ಮನು ಜನ್ಮತಾಳಿದ ಕಥೆಯನ್ನು ನಿಮ್ಮದೇ ಆದ ಮಾತಿನಲ್ಲಿ ಬರೆಯಿರಿ.

X. ಕೆಳಗಿನ ಗದ್ಯಭಾಗವನ್ನು ಮನಸ್ಸಿನಲ್ಲಿ ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.                                                                                            1 × 4 = 4 (2 + 2)

ನಾನಿಲ್ಲಿ ಗುರುಸ್ಥಾನದಲ್ಲಿ ನಿಂತಿಲ್ಲ. ನೀವು ಶಿಷ್ಯ ಸ್ಥಾನದಲ್ಲಿ ಕುಳಿತಿಲ್ಲ. ನಾನು ಉಪದೇಶ ಮಾಡುತ್ತಿಲ್ಲ. ವಿಜ್ಞಾಪಿಸುತ್ತೇನೆ. ನನ್ನಂತೆಯೇ ನಿಮ್ಮಲ್ಲಿ ಜಿಜ್ಞಾಸೆ ಮೂಡಿರಬಹುದು. ಜಿಜ್ಞಾಸೆ ಮಾಡದೆ ಇದ್ದವರಿಗೆ ಜಿಜ್ಞಾಸೆ ಮಾಡಲು ಭಾವಾವಕಾಶಗಳು ದೊರೆಯುತ್ತವೆ. ಯುವಕರು ನಿರಂಕುಶಮತಿಗಳಾಗಬೇಕು. ನಿರಂಕುಶ ಮತಿ ಎಂಬುದು ನಿರಂಕುಶ ಪ್ರಭುತ್ವ ಎಂದು ತಿಳಿಯಬಾರದು. ನಿರಂಕುಶ ಪ್ರಭುತ್ವದ ಲಕ್ಷಣವೆಂದರೆ ವಿವೇಕಹೀನವಾದ ಸ್ವಚ್ಛಂದ ವರ್ತನೆ. ಸಂಯಮಪೂರ್ಣವಾದ ಬುದ್ಧಿ ಸ್ವಾತಂತ್ರ್ಯವೇ ನಿರಂಕುಶಮತಿ.

ಮತಿ ಮಾನವನ ಸರ್ವೋತ್ಕೃಷ್ಟವಾದ ಆಯುಧ. ಮತಿಯೇ ಕತ್ತಲಲ್ಲಿ ದಾರಿ ತೋರುವ ರತ್ನದ ಕೈದೀವಿಗೆ. ಮತಿಯ ದೆಸೆಯಿಂದಲೇ ಪ್ರಾಣಿ ಮಾತ್ರವಾಗುತ್ತಿದ್ದ ನರಜೀವಿ ಮನುಷ್ಯತ್ವಕ್ಕೆ ಏರಿದ್ದಾನೆ. ಮತಿಯ ಕೃಪಾಮಹಿಮೆಯಿಂದಲೇ ನಾವು ಮನುಷ್ಯತ್ವದಿಂದ ದೈವತ್ವಕ್ಕೆ ಏರಬೇಕಾಗಿದೆ. ಮತಿ ಮನುಷ್ಯತ್ವದ ಹಕ್ಕು. ಆದ್ದರಿಂದ ಸಹೋದರರೇ ಮತಿ ನಿಮ್ಮ ನೆಚ್ಚಿನ ರತ್ನದ ದೀವಿಗೆಯಾಗಲಿ. ಸ್ವಲ್ಪವಾಗಿಯೋ ಹೆಚ್ಚಾಗಿಯೋ ಮತಿ ಮನುಷ್ಯರೆಲ್ಲರಲ್ಲಿಯೂ ಇರುತ್ತದೆ. ಆದರೆ ಈಗೇನಾಗಿದೆ ಅದರ ಗತಿ? ಮೌಢ್ಯದಿಂದಲೂ, ಮತಾಚಾರಗಳಿಂದಲೂ ಸಮಾಜಭೀತಿಯಿಂದಲೂ, ರಾಜಭಯದಿಂದಲೂ ಸ್ವರ್ಗನರಕ ದೇವಾನುದೇವತೆಗಳ ಮೋಹ ಮಾಯೆಗಳಿಂದಲೂ ಅದು ಸತ್ವ ರಹಿತವಾಗಿದೆ, ಕಾಂತಿ ಹೀನವಾಗಿದೆ.

  1. ಪ್ರಶ್ನೆಗಳು:

a) ನಿರಂಕುಶಮತಿ ಮತ್ತು ನಿರಂಕುಶ ಪ್ರಭುತ್ವದ ನಡುವೆ ಇರುವ ವ್ಯತ್ಯಾಸವೇನು?

b) ಬದುಕಿನಲ್ಲಿ ಮತಿಯ ಮಹತ್ವವೇನು?

XI. ಕೆಳಗಿನ ಯಾವುದಾದರೂ ಒಂದು ವಿಷಯವನ್ನು ಕುರಿತು ಪ್ರಬಂಧ ಬರೆಯಿರಿ.

                                                                                                                                         1 × 4 = 4

  1. ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಸಾಧನೆ

ಅಥವಾ

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು

XII. ಕೆಳಗಿನ ಯಾವುದಾದರೂ ಒಂದಕ್ಕೆ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ಪತ್ರ ಬರೆಯಿರಿ                                                                                                    1 × 5 = 5
  1. ನಿಮ್ಮನ್ನು ಕೊಪ್ಪಳದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ‘ಮಧು’ ಎಂದು ಭಾವಿಸಿಕೊಂಡು, ‘ಸಸ್ಯಶ್ಯಾಮಲ’ ಕಾರ್ಯಕ್ರಮಕ್ಕೆ ಸಸಿಗಳನ್ನು ಒದಗಿಸುವಂತೆ ಕೋರಿ ವಲಯ ಅರಣ್ಯಾಧಿಕಾರಿಗಳಿಗೆ ಒಂದು ಮನವಿ ಪತ್ರವನ್ನು ಬರೆಯಿರಿ.

ಅಥವಾ

ನಿಮ್ಮನ್ನು ಧಾರವಾಡ ಜಿಲ್ಲೆಯ ನವಲಗುಂದದ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿ ‘ಮೋಹನ್’ ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯ ವಿಶೇಷತೆಗಳನ್ನು ವಿವರಿಸಿ, ಮಂಡ್ಯದ ರಾಜೀವನಗರದ ನಿವಾಸಿಯಾದ ‘ಮಂಜುನಾಥ’ ಎಂಬ ಹೆಸರಿನ ತಂದೆಯವರಿಗೆ ಒಂದು ಪತ್ರ ಬರೆಯಿರಿ.