1. ರಾಷ್ಟ್ರೀಯ ಹಬ್ಬಗಳ ಮಹತ್ವ
ಪೀಠಿಕೆ
ದೇಶಪ್ರೇಮ ಹಾಗು ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ರಾಷ್ಟ್ರೀಯ ಹಬ್ಬಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾಷ್ಟ್ರೀಯ ಹಬ್ಬಗಳು ರಾಷ್ಟ್ರದ ಜನರಲ್ಲಿರುವ ಜಾತಿ, ಮತ, ಭಾಷೆ, ಭೇದಭಾವಗಳನ್ನು ಹೋಗಲಾಡಿಸುತ್ತವೆ. ಭಾರತವು ವೈವಿಧ್ಯಮಯ ದೇಶವಾಗಿದೆ. ಧರ್ಮ, ಜಾತಿ ಅಥವಾ ಪ್ರದೇಶದ ಭೇದವನ್ನು ಮೀರಿ ಎಲ್ಲರೂ ಒಟ್ಟಾಗಿ ಆಚರಿಸುವುದೇ ರಾಷ್ಟ್ರೀಯ ಹಬ್ಬಗಳಾಗಿವೆ.
ವಿಷಯ ವಿವರಣೆ
ಎಲ್ಲಾ ಧರ್ಮ, ಸಂಸ್ಕೃತಿ ಮತ್ತು ಎಲ್ಲಾ ಜನರು ಒಟ್ಟಾಗಿ, ಒಗ್ಗಟ್ಟಿನಿಂದ ಆಚರಿಸುವ ಹಬ್ಬಗಳೇ ರಾಷ್ಟ್ರೀಯ ಹಬ್ಬಗಳಾಗಿವೆ. ವಿವಿಧ ಧರ್ಮಗಳು ಮತ್ತು ಸ್ಥಳಗಳ ಜನರು ತಮ್ಮ ಹೃದಯದಲ್ಲಿ ರಾಷ್ಟ್ರದ ನಿಷ್ಠೆಯೊಂದಿಗೆ ಈ ಹಬ್ಬಗಳನ್ನು ಆಚರಿಸುತ್ತಾರೆ. ಈ ಹಬ್ಬಗಳ ಜೊತೆಗೆ ಇಡೀ ಭಾರತವು ಹೆಮ್ಮೆಯಿಂದ ತಮ್ಮ ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಆಚರಿಸುವ ಕೆಲವು ರಾಷ್ಟ್ರೀಯ ಹಬ್ಬಗಳಿವೆ.
ನಮ್ಮ ಭಾರತ ದೇಶದಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ, ಜನವರಿ 26ರ ಗಣರಾಜ್ಯೋತ್ಸವ, ಅಕ್ಟೋಬರ್ 2ರ ಗಾಂಧೀ ಜಯಂತಿ, ಮುಂತಾದ ದಿನಗಳನ್ನು ಕೆಲವು ಮಹನೀಯರನ್ನು ಸ್ಮರಿಸುವ ದಿನಗಳಾಗಿ ಆಚರಿಸಲಾಗುತ್ತದೆ. ಇವುಗಳೇ ರಾಷ್ಟ್ರೀಯ ಹಬ್ಬಗಳಾಗಿವೆ.
ರಾಷ್ಟ್ರೀಯ ಹಬ್ಬಗಳ ಮಹತ್ವಗಳನ್ನು ಈ ಕೆಳಗಿನಂತೆ ನೋಡಬಹುದಾಗಿದೆ. ರಾಷ್ಟ್ರೀಯ ಹಬ್ಬಗಳು ಜನರಿಗೆ, ಹೆಚ್ಚಾಗಿ ಯುವಪೀಳಿಗೆಗೆ, ತಮ್ಮ ಮಾತೃಭೂಮಿಯ ಗತಕಾಲದ ಘಟನೆಗಳು ಹಾಗೂ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಯಕರನ್ನು ನೆನಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತವೆ. ಇದರಿಂದ ರಾಷ್ಟ್ರೀಯ ನಾಯಕರ ಕೆಲವು ವಿಚಾರಧಾರೆಗಳನ್ನು ಯುವಜನತೆ ಪ್ರೇರಣೆಯಾಗಿ ತಮ್ಮಲ್ಲಿ ಅಳವಡಿಸಿಕೊಳ್ಳಲು ಸಹಾಯಕವಾಗುತ್ತದೆ. ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವಲ್ಲಿ ರಾಷ್ಟ್ರೀಯ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ. ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಇಂದು ಎಲ್ಲರಲ್ಲೂ ಪ್ರೇರಕವಾಗಲಿ ಎಂಬ ಉದ್ದೇಶದಿಂದ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ.
ಉಪಸಂಹಾರ
ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವುದರಿಂದ ಜನರಲ್ಲಿ ರಾಷ್ಟ್ರಾಭಿಮಾನ, ಭಾವೈಕ್ಯತೆ, ರಾಷ್ಟ್ರಭಕ್ತಿ ಮತ್ತು ಸಹಕಾರ ಮನೋಭಾವ ಬೆಳೆಯಲು ಸಹಾಯಕವಾಗುತ್ತದೆ.
ರಾಷ್ಟ್ರೀಯ ಹಬ್ಬಗಳು
ಪೀಠಿಕೆ: ಒಂದು ದೇಶದ ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹಬ್ಬಗಳು ಪ್ರಾಮುಖ್ಯತೆಯನ್ನು ಹೊಂದಿವೆ , ಇಡೀ ರಾಷ್ಟ್ರದ ಜನರೆಲ್ಲರೂ ಭೇದ ಭಾವವಿಲ್ಲದೆ ಒಟ್ಟಾಗಿ ಆಚರಿಸುವ ಹಬ್ಬಗಳು ರಾಷ್ಟ್ರೀಯ ಹಬ್ಬಗಳು
ವಿಷಯ ವಿವರಣೆ: ಭಾರತ ನೂರಾರು ವರ್ಷಗಳ ಕಾಲ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು ಭಾರತೀಯರ ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಆಂಗ್ಲರು ಭಾರತದ ಆಡಳಿತವನ್ನು ಹಿಡಿದರು. ಆಗ ಭಾರತೀಯರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಹಳೆ ಊದಿದರು. ಕೊನೆಗೆ 1947 ಆಗಸ್ಟ್ 15 ರಂದು ಸ್ವಾತಂತ್ರ ಪಡೆದು ಆ ದಿನವನ್ನು ಸ್ವಾತಂತ್ರ್ಯ ದಿನಾಚರಣೆ ಎಂದು ಆಚರಿಸುತ್ತೇವೆ
ಭಾರತ ಸ್ವಾತಂತ್ರ್ಯ ಪಡೆದ ನಂತರ ಆಡಳಿತದ ರೂಪರೇಷೆಗಳನ್ನು ತಿಳಿಸಲು ಸಂವಿಧಾನವನ್ನು ರಚಿಸಲಾಯಿತು. ಅದು ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವ ಎಂದು ಕರೆಯುತ್ತೇವೆ . ಮಹಾತ್ಮ ಗಾಂಧೀಜಿಯವರ ಜನುಮ ದಿನವಾದ ಅಕ್ಟೋಬರ್ ಎರಡನ್ನು ಗಾಂಧೀಜಿಯಂತಿ ದಿನವನ್ನಾಗಿ ಆಚರಿಸುವ ಮೂಲಕ ರಾಷ್ಟ್ರಪಿತ ಗಾಂಧೀಜಿಯವರನ್ನು ನೆನೆಯುವ ದಿನವಾಗಿದೆ. ಹೀಗೆ ಸ್ವಾತಂತ್ರ್ಯ ದಿನಾಚರಣೆ ಗಣರಾಜ್ಯೋತ್ಸವ ಮತ್ತು ಗಾಂಧಿ ಜಯಂತಿಯನ್ನು ಪ್ರಮುಖ ರಾಷ್ಟ್ರೀಯ ಹಬ್ಬಗಳನ್ನಾಗಿ ಆಚರಿಸುತ್ತೇವೆ.
ಉಪಸಂಹಾರ: ರಾಷ್ಟ್ರೀಯ ಹಬ್ಬಗಳು ನಮ್ಮ ಹೆಮ್ಮೆಯ ಸಂಕೇತ ಇವುಗಳನ್ನು ಆಚರಿಸುವ ಮೂಲಕ ರಾಷ್ಟ್ರ ಪ್ರೇಮ ಹಾಗು ದೇಶಭಕ್ತಿ ಎನ್ನುವ ಹೊಂದಲು ಸಾಧ್ಯವಾಗುತ್ತದೆ.