ನಾನು ವಾಣಿ ಡಿ ಆರ್, ಉತ್ಸಾಹಭರಿತ ಮತ್ತು ಸಮರ್ಪಿತ ಕನ್ನಡ ಶಿಕ್ಷಕಿ. ಪ್ರಾಥಮಿಕ, ಪ್ರೌಢ ಹಾಗೂ ಹೈಸ್ಕೂಲ್ ಹಂತದ ವಿದ್ಯಾರ್ಥಿಗಳಿಗೆ CBSE, ICSE ಮತ್ತು ರಾಜ್ಯ ಪಠ್ಯಕ್ರಮದ ಕನ್ನಡ ವಿಷಯವನ್ನು ಬೋಧಿಸುತ್ತಿದ್ದೇನೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಮತ್ತು ಶಿಕ್ಷಣದಲ್ಲಿ ಡಿಪ್ಲೋಮಾ(ಡಿ.ಎಡ್) ಮತ್ತು ಶಿಕ್ಷಣದಲ್ಲಿ ಪದವಿ (ಬಿ.ಎಡ್.) ಪಡೆದಿದ್ದು, ಹಲವು ವರ್ಷಗಳ ಬೋಧನಾ ಅನುಭವದೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಕನ್ನಡ ಭಾಷೆ ನನ್ನ ಪ್ರೀತಿ ಮತ್ತು ಪ್ರೇರಣೆ. ನನ್ನ ತರಗತಿಯಲ್ಲಿ ವಿದ್ಯಾರ್ಥಿಗಳ ಮಟ್ಟಕ್ಕೆ ಅನುಗುಣವಾಗಿ ಸರಳವಾಗಿ, ಸ್ಪಷ್ಟವಾಗಿ ಪಾಠಗಳನ್ನು ವಿವರಿಸುತ್ತೇನೆ. ನೈಜ ಜೀವನದ ಉದಾಹರಣೆಗಳು, ಕಥೆಗಳು, ಚಟುವಟಿಕೆಗಳು, ಚರ್ಚೆಗಳು ಹಾಗೂ ಸೃಜನಾತ್ಮಕ ಬರವಣಿಗೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಓದು, ಬರವಣಿಗೆ, ವ್ಯಾಕರಣ ಹಾಗೂ ಭಾಷಣ ಕೌಶಲ್ಯಗಳನ್ನು ಬೆಳೆಸಲು ಪ್ರಯತ್ನಿಸುತ್ತೇನೆ. ಪಠ್ಯಕ್ರಮವನ್ನು ಪೂರ್ಣಗೊಳಿಸುವುದಷ್ಟೇ ಅಲ್ಲ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಚಿಂತನಾ ಶಕ್ತಿಯನ್ನು ವೃದ್ಧಿಸುವುದು ನನ್ನ ಧ್ಯೇಯವಾಗಿದೆ.
“ಕನ್ನಡವು ಕೇವಲ ಪದಗಳಲ್ಲ, ಅದು ಜ್ಞಾನ, ಸಂಸ್ಕೃತಿ ಮತ್ತು ಬೆಳವಣಿಗೆಯ ದಾರಿಯಾಗಿದೆ.”
ನಿತ್ಯವಾಣಿ ವೆಬ್ಸೈಟ್ಗೆ ಭೇಟಿ ನೀಡಿ, ಓದಿ, ಹಂಚಿಕೊಳ್ಳಿ. ನಿಮ್ಮ ಬೆಂಬಲವೇ ನನ್ನ ಪ್ರೇರಣೆ.
contact me : vani.bn1551@gmail.com
ಧನ್ಯವಾದಗಳು 🙏