Telegram Join My Telegram WhatsApp Join My WhatsApp

“CBSE, STATE- Grammar 2026: ವ್ಯಾಕರಣದ ಪ್ರಮುಖ ಅಂಶಗಳ ಉದಾಹರಣೆಗಳು”

7,8,9,10 ನೆಯ ತರಗತಿಗಳ “CBSE, STATE- Grammar 2026: ವ್ಯಾಕರಣದ ಪ್ರಮುಖ ಅಂಶಗಳ ಉದಾಹರಣೆಗಳು”-1

ಮುನ್ನುಡಿ

ವ್ಯಾಕರಣ ಎಂದರೆ ಭಾಷೆಯ ಪದಗಳು, ವಾಕ್ಯಗಳು ಮತ್ತು ಅವುಗಳ ಸರಿಯಾದ ಬಳಕೆಯನ್ನು ತಿಳಿಸುವ ನಿಯಮಗಳ ಸಮೂಹ. ಸರಿಯಾದ ರೀತಿಯಲ್ಲಿ ಮಾತನಾಡಲು ಮತ್ತು ಬರೆಯಲು ವ್ಯಾಕರಣ ಬಹಳ ಮುಖ್ಯವಾಗಿದೆ. ಕನ್ನಡ ಭಾಷೆಯ ವ್ಯಾಕರಣವು ಪದರಚನೆ, ವಾಕ್ಯರಚನೆ ಮತ್ತು ಅರ್ಥವ್ಯವಸ್ಥೆಯನ್ನು ತಿಳಿಸುತ್ತದೆ.

ಭಾಷೆಯ ಸೌಂದರ್ಯ ಮತ್ತು ಸ್ಪಷ್ಟತೆಯನ್ನು ಹೆಚ್ಚಿಸುವಲ್ಲಿ ವ್ಯಾಕರಣದ ಪಾತ್ರ ಅತ್ಯಂತ ಪ್ರಮುಖವಾಗಿದೆ. ವ್ಯಾಕರಣದ ಸಹಾಯದಿಂದ ನಾವು ಪದಗಳನ್ನು ಸರಿಯಾದ ಕ್ರಮದಲ್ಲಿ ಬಳಸಿ ಸ್ಪಷ್ಟವಾದ ಮತ್ತು ಅರ್ಥಪೂರ್ಣವಾದ ವಾಕ್ಯಗಳನ್ನು ರಚಿಸಬಹುದು. ವ್ಯಾಕರಣ ತಿಳಿದಿದ್ದರೆ ಭಾಷೆಯನ್ನು ಸುಲಭವಾಗಿ ಕಲಿಯಬಹುದು ಮತ್ತು ನಮ್ಮ ಅಭಿಪ್ರಾಯಗಳನ್ನು ಇತರರಿಗೆ ಸರಿಯಾಗಿ ತಿಳಿಸಬಹುದು.

ಇಲ್ಲಿ 7,8,9,10 ನೆಯ ತರಗತಿಗಳ “CBSE Grammar 2026: ವ್ಯಾಕರಣದ ಪ್ರಮುಖ ಅಂಶಗಳ ಕೆಲವು ಉದಾಹರಣೆಗಳನ್ನು ಕೊಡಲಾಗಿದೆ.

ಕೆಳಗಿನ ಪ್ರತಿಯೊಂದು ಬಹು ಆಯ್ಕೆಯ ಪ್ರಶ್ನೆಗಳಿಗೆ ನಾಲ್ಕು ಉತ್ತರಗಳನ್ನು ಕೊಡಲಾಗಿದೆ ಅವುಗಳಲ್ಲಿ ಸರಿಯಾದ ಪದವನ್ನು ಆರಿಸಿ ಬರೆಯಿರಿ.

I. ಈ ಪದಗಳ ಸಂಧಿ ಹೆಸರನ್ನು ಗುರುತಿಸಿ

a) ವನವನ್ನು       –   ಲೋಪ ಸಂಧಿ
b) ಮಾತಿಲ್ಲ         –   ಆದೇಶ ಸಂಧಿ
c) ದೇವಾಲಯ     –  ಆಗಮ ಸಂಧಿ
d) ಮಳೆಗಾಲ        –  ಸವರ್ಣದೀರ್ಘ ಸಂಧಿ

A. a-3   b-4    c-2    d-1
B. a-3   b- 1   c-4    d-2
C. a-4    b-1    c-3   d-2 
D. a-2   b-3    c-1   d-4


II. ‘ಬೆಟ್ಟದಾವರೆ’ ಎಂಬ ಪದವು __________ ಸಮಾಸಕ್ಕೆ ಉದಾಹರಣೆ ಆಗಿದೆ.

A. ಕ್ರಿಯಾ ಸಮಾಸ
B. ಕರ್ಮಧಾರೆಯ ಸಮಾಸ
C. ದ್ವಿಗು ಸಮಾಸ
D. ತತ್ಪುರುಷ ಸಮಾಸ


III. ‘ಶಾಲೆಯನ್ನು’ ಎಂಬ ಪದವು ದ್ವಿತೀಯಾ ವಿಭಕ್ತಿಯಾದರೆ ‘ಪ್ರಕೃತಿಯು’ ಎಂಬ ಪದವು __________ ವಿಭಕ್ತಿಯಾಗಿದೆ.

A. ಪ್ರಥಮಾ
B. ಸಪ್ತಮಿ
C. ತೃತೀಯಾ
D. ಚತುರ್ಥಿ


IV. ‘ನೀನು, ನೀವು’ – ಮಧ್ಯಮ ಪುರುಷ ಸರ್ವನಾಮ. ‘ತಾನು, ತನ್ನ’ – __________

A. ಪ್ರಥಮ ಪುರುಷ ಸರ್ವನಾಮ
B. ಉತ್ತಮ ಪುರುಷ ಸರ್ವನಾಮ
C. ಪ್ರಶ್ನಾರ್ಥಕ ಸರ್ವನಾಮ
D. ಆತ್ಮಾರ್ಥಕ ಸರ್ವನಾಮ


V. ‘ರಾಮನು ಮೈದಾನದಲ್ಲಿ ಆಟವಾಡುತ್ತಿದ್ದಾನೆ’ ಈ ವಾಕ್ಯದಲ್ಲಿರುವ ಧಾತು __________

A. ರಾಮನು
B. ಮೈದಾನದಲ್ಲಿ
C. ಆಟವಾಡುತ್ತಿದ್ದಾನೆ
D. ಆಟ


VI. ‘ಮನೆ – ಮನ’ ಈ ಪದಗಳ ಅರ್ಥವ್ಯತ್ಯಾಸಗಳ ಸರಿಯಾದ ಕ್ರಮ __________

A. ತಪ್ಪು – ಹಳೆಯದು
B. ಒಪ್ಪಿಗೆ – ಹಾರ
C. ಮಾತೆ – ಮಾಸು
D. ಗೃಹ – ಮನಸ್ಸು


VII. ‘ಅತಿಯಾದ ಪ್ರೀತಿ’ ಪದದ ಸಮಾನಾರ್ಥಕ ಪದ __________

A. ಸಕ್ಕರೆ
B. ಶಾಶ್ವತ
C. ವ್ಯಾಮೋಹ
D. ಪ್ರಾಪ್ತಿ


VIII. ‘ಏಕಲವ್ಯನು ಕಾಡಿನಲ್ಲಿ ಧೈರ್ಯದಿಂದ ಇದ್ದನು.’
ಈ ವಾಕ್ಯದಲ್ಲಿ ಗೆರೆ ಎಳೆದ ಪದವು __________ ವಾಚಕವಾಗಿದೆ.

A. ವಸ್ತು ವಾಚಕ
B. ಗುಣ ವಾಚಕ
C. ಪ್ರಮಾಣ ವಾಚಕ
D. ದಿಗ್ವಾಚಕ


IX. ಕೆಳಗೆ ಕೊಟ್ಟಿರುವ ತತ್ಸಮ–ತದ್ಭವಗಳ ಸರಿಯಾದ ರೂಪವನ್ನು ಗುರುತಿಸಿ.

A. ವರ್ಷ – ಹರ್ಷ
B. ಕಳಶ – ಗೋಪುರ
C. ಧ್ವನಿ – ದನಿ
D. ಶಿರ – ತಲೆ


X. ಈ ಕೆಳಗಿನ ಪದಗಳಲ್ಲಿ ಗುಂಪಿಗೆ ಸೇರದ ಪದವನ್ನು ಗುರುತಿಸಿ.

A. ಪಟಪಟ
B. ಮನೆಮಠ
C. ಹಣ್ಣುಹಂಪಲು
D. ತಿಂಡಿ ತಿನಿಸು

ಉತ್ತರಗಳು 

I. ಈ ಪದಗಳ ಸಂಧಿ – ಸರಿಯಾದ ಉತ್ತರ:
B. a-3   b- 1   c-4    d-2

II. ‘ಬೆಟ್ಟದಾವರೆ’ ಎಂಬ ಪದವು
D. ತತ್ಪುರುಷ ಸಮಾಸ

III. ‘ಶಾಲೆಯನ್ನು’ ದ್ವಿತೀಯಾ ವಿಭಕ್ತಿ ಆದರೆ    ‘ಪ್ರಕೃತಿಯು’—————
A. ಪ್ರಥಮಾ ವಿಭಕ್ತಿ

IV. ‘ತಾನು, ತನ್ನ’
D. ಆತ್ಮಾರ್ಥಕ ಸರ್ವನಾಮ

V. ‘ರಾಮನು ಮೈದಾನದಲ್ಲಿ ಆಟವಾಡುತ್ತಿದ್ದಾನೆ’ ಈ ವಾಕ್ಯದಲ್ಲಿರುವ ಧಾತು
D. ಆಟ

VI. ‘ಮನೆ – ಮನ’ ಅರ್ಥವ್ಯತ್ಯಾಸಗಳ ಸರಿಯಾದ ಕ್ರಮ
D. ಗೃಹ – ಮನಸ್ಸು

VII. ‘ಅತಿಯಾದ ಪ್ರೀತಿ’ ಪದದ ಸಮಾನಾರ್ಥಕ ಪದ
C. ವ್ಯಾಮೋಹ

VIII. ‘ಧೈರ್ಯದಿಂದ’ ಎಂಬ ಪದವು
B. ಗುಣ ವಾಚಕ

IX. ಸರಿಯಾದ ತತ್ಸಮ – ತದ್ಭವ ರೂಪ
C. ಧ್ವನಿ – ದನಿ

X. ಗುಂಪಿಗೆ ಸೇರದ ಪದ
A. ಪಟಪಟ