6-10 ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಬಹುಆಯ್ಕೆಯ ಪ್ರಶ್ನೆಗಳು
ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ ಬರೆಯಿರಿ.
- ‘ಅನ್ವರ್ಥನಾಮ’ ಪದಕ್ಕೆ ಉದಾಹರಣೆಯಾಗಿರುವ ಪದ.
ಎ) ಬೆಂಗಳೂರು ಬಿ) ಬೆಟ್ಟ ಸಿ) ಶಿಕ್ಷಕ ಡಿ) ಆಕಾಶ - ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ.
ಎ) ಆರು ಬಿ) ಹತ್ತು ಸಿ) ಏಳು ಡಿ) ಹದಿಮೂರು
- ‘ಮನದಲ್ಲಿ’ ಈ ಪದದಲ್ಲಿರುವ ವಿಭಕ್ತಿ.
ಎ) ಪ್ರಥಮಾ ಬಿ) ಚತುರ್ಥೀ ಸಿ) ದ್ವಿತೀಯಾ ಡಿ) ಸಪ್ತಮೀ
- ರಾಮನು ಶಾಲೆಗೆ ಬಂದನು. ಈ ವಾಕ್ಯದಲ್ಲಿರುವ ಕಾಲ.
ಎ) ವರ್ತಮಾನಕಾಲ ಬಿ) ಭವಿಷ್ಯತ್ ಕಾಲ ಸಿ) ಭೂತಕಾಲ ಡಿ) ಸಕಾಲ
- ‘ಬೆಟ್ಟದಾವರೆ’ ಈ ಪದದಲ್ಲಿರುವ ಸಂಧಿ.
ಎ) ಆದೇಶ ಸಂಧಿ ಬಿ) ಗುಣ ಸಂಧಿ ಸಿ) ಆಗಮ ಸಂಧಿ ಡಿ) ಲೋಪ ಸಂಧಿ
- ಆಗಮ ಸಂಧಿಗೆ ಉದಾಹರಣೆಯಾಗಿರುವ ಪದ.
ಎ) ಮತ್ತೊಬ್ಬ ಬಿ) ವೀರೇಶ ಸಿ) ದೇವಾಲಯ ಡಿ) ಕಾಶಿಯಲ್ಲಿ
- ಅನುಸ್ವಾರ, ವಿಸರ್ಗಗಳನ್ನು ಹೀಗೆಂದು ಕರೆಯುತ್ತಾರೆ.
ಎ) ಯೋಗವಾಹಗಳು ಬಿ) ಸ್ವರಗಳು ಸಿ) ಅನುನಾಸಿಕಗಳು ಡಿ) ವ್ಯಂಜನಗಳು
- ದ್ವಿರುಕ್ತಿ ಪದವಿದು.
ಎ) ಕ್ರಿಮಿಕೀಟ ಬಿ) ದೊಡ್ಡ ದೊಡ್ಡ ಸಿ) ಹಗಲಿರುಳು ಡಿ) ಸುಖದುಃಖ
- ಇಬ್ರಾಹಿಂ ಸಂತೋಷದಿಂದ ಬಾವುಟವನ್ನು ಹಾರಿಸಿದನು – ಈ ವಾಕ್ಯದಲ್ಲಿರುವ ಕ್ರಿಯಾಪದ.
ಎ) ಹಾರಿಸಿದನು ಬಿ) ಇಬ್ರಾಹಿಂ ಸಿ) ಬಾವುಟವನ್ನು ಡಿ) ಸಂತೋಷದಿಂದ
- ‘ಆಶ್ಚರ್ಯ’ ಈ ಪದದ ತದ್ಭವ ರೂಪ.
ಎ) ಆಸರೆ ಬಿ) ಅವಲಂಬನೆ ಸಿ) ಆಸರೆ ಡಿ) ಅಚ್ಚರಿ
- ‘ಕೃತಘ್ನ’ ಈ ಪದದ ವಿರುದ್ಧ ಪದ.
ಎ) ಕೃತಜ್ನ ಬಿ) ಕೃತಜ್ಞ ಸಿ) ಕೃತಕೃತ್ಯ ಡಿ) ಕೃತಕ
- ‘ಬೋಧಿವೃಕ್ಷ’ ಈ ಪದದ ಅರ್ಥ.
ಎ) ಆಲದಮರ ಬಿ) ಬೇವಿನಮರ ಸಿ) ಅರಳಿಮರ ಡಿ) ಮಾವಿನಮರ
- ಅನುನಾಸಿಕ ಸಂಧಿಗೆ ಉದಾಹರಣೆಯಾಗಿರುವ ಪದ.
ಎ) ಸಚ್ಚಿತ್ರ ಬಿ) ಚಿನ್ಮೂಲ ಸಿ) ಷಡಾನನ ಡಿ) ಅತ್ಯುಕ್ತಿ
- ಇಂದ್ರನುತನಗಾದ ಸಂತೋಷವನ್ನು ವರವನ್ನು ಕೊಡುವುದರ ಮೂಲಕ ಪ್ರಕಟಿಸಿದನು – ಈ ವಾಕ್ಯದಲ್ಲಿರುವ ಸರ್ವನಾಮ ಪದ.
ಎ) ಇಂದ್ರನು ಬಿ) ಸಂತೋಷವನ್ನು ಸಿ) ಪ್ರಕಟಿಸಿದನು ಡಿ) ತನಗಾದ
- ದಿಗ್ವಾಚಕ ಪದವಿದು.
ಎ) ಸಿಹಿ ಹಣ್ಣು ಬಿ) ಮಂಗಳೂರು ಸಿ) ಬಡಗಣ ಡಿ) ಮೂವರು
- ‘ಜುಳುಜುಳು’ ಎಂಬ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ಎ) ನುಡಿಗಟ್ಟು ಬಿ) ಜೋಡುನುಡಿ ಸಿ) ದ್ವಿರುಕ್ತಿ ಡಿ) ಅನುಕರಣಾವ್ಯಯ
- ಮಹೇಶನ ಬಳಿ ನೂರು ಪುಸ್ತಕಗಳಿವೆ. ಈ ವಾಕ್ಯದಲ್ಲಿರುವ ಸಂಖ್ಯಾವಾಚಕ ಪದವಿದು.
ಎ) ನೂರು ಬಿ) ಬಳಿ ಸಿ) ಮಹೇಶನು ಡಿ) ಪುಸ್ತಕಗಳಿವೆ
- ನಳನಳಿಸು ಪದದ ಅರ್ಥ.
ಎ) ವಿಷ ಬಿ) ಕೋಮಲವಾದ ಸಿ) ಬೆರಗಿನಿಂದ ಡಿ) ಸಂಪತ್ತು
- ಕ್ರಿಯಾಪದದ ಮೂಲ ರೂಪ.
ಎ) ಸ್ವರ ಬಿ) ಧಾತು ಸಿ) ವ್ಯಂಜನ ಡಿ) ಕರ್ಮಪದ
- ‘ಕುಪ್ಪಳ್ಳಿ’ ಪದವು ನಾಮಪದದ ಈ ಪ್ರಕಾರಕ್ಕೆ ಸೇರಿದೆ.
ಎ) ಅಂಕಿತನಾಮ ಬಿ) ಅನ್ವರ್ಥನಾಮ ಸಿ) ರೂಢನಾಮ ಡಿ) ಸರ್ವನಾಮ
ಉತ್ತರಗಳು (Answer Key)
- ಸಿ) ಶಿಕ್ಷಕ
- ಬಿ) ಹತ್ತು
- ಡಿ) ಸಪ್ತಮೀ
- ಸಿ) ಭೂತಕಾಲ
- ಎ) ಆದೇಶ ಸಂಧಿ
- ಡಿ) ಕಾಶಿಯಲ್ಲಿ
- ಎ) ಯೋಗವಾಹಗಳು
- ಬಿ) ದೊಡ್ಡ ದೊಡ್ಡ
- ಎ) ಹಾರಿಸಿದನು
- ಡಿ) ಅಚ್ಚರಿ
- ಬಿ) ಕೃತಜ್ಞ
- ಸಿ) ಅರಳಿಮರ
- ಬಿ) ಚಿನ್ಮೂಲ
- ಡಿ) ತನಗಾದ
- ಸಿ) ಬಡಗಣ
- ಡಿ) ಅನುಕರಣಾವ್ಯಯ
- ಎ) ನೂರು
- ಬಿ) ಕೋಮಲವಾದ
- ಬಿ) ಧಾತು
- ಸಿ) ರೂಢನಾಮ