KANNADA WORKSHEETS FOR GRADE 7-10
ಬಹು ಆಯ್ಕೆ ಪ್ರಶ್ನೆಗಳು
ಕೆಳಗಿನ ಪ್ರತಿಯೊಂದು ಬಹು ಆಯ್ಕೆಯ ಪ್ರಶ್ನೆಗಳಿಗೆ ನಾಲ್ಕು ಉತ್ತರಗಳನ್ನು ಕೊಡಲಾಗಿದೆ. ಅವುಗಳಲ್ಲಿ ಸರಿಯಾದ ಪದವನ್ನು ಆರಿಸಿ ಬರೆಯಿರಿ.
-
‘ಅಂಕಿತ ನಾಮ’ ಪದಕ್ಕೆ ಉದಾಹರಣೆಯಾಗಿರುವ ಪದ.
A. ಬೆಂಗಳೂರು
B. ಬೆಟ್ಟ
C. ಶಿಕ್ಷಕ
D. ಆಕಾಶ -
ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳ ಸಂಖ್ಯೆ.
A. ಐದು
B. ಹತ್ತು
C. ಏಳು
D. ಹದಿಮೂರು -
‘ಶಾಲೆಯನ್ನು’ ಈ ಪದದಲ್ಲಿರುವ ವಿಭಕ್ತಿ.
A. ಪ್ರಥಮಾ
B. ಚತುರ್ಥೀ
C. ದ್ವಿತೀಯಾ
D. ಸಪ್ತಮೀ -
ಸೀತೆಯು ನೀರನ್ನು ತಂದಳು – ಈ ವಾಕ್ಯದಲ್ಲಿರುವ ಕಾಲ.
A. ವರ್ತಮಾನಕಾಲ
B. ಭವಿಷ್ಯತ್ ಕಾಲ
C. ಭೂತಕಾಲ
D. ಸಕಾಲ -
ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು.
A. ಯೋಗವಾಹಗಳು
B. ಸ್ವರಗಳು
C. ಅನುನಾಸಿಕಗಳು
D. ವ್ಯಂಜನಗಳು -
ದ್ವಿರುಕ್ತಿ ಪದವಿದು.
A. ಕ್ರಿಮಿಕೀಟ
B. ದೊಡ್ಡ ದೊಡ್ಡ
C. ಹಗಲಿರುಳು
D. ಸುಖದುಃಖ -
ಇಬ್ರಾಹಿಂ ಹಾಡನ್ನು ಹಾಡಿದನು – ಈ ವಾಕ್ಯದಲ್ಲಿರುವ ಕ್ರಿಯಾಪದ.
A. ಹಾಡನ್ನು
B. ಇಬ್ರಾಹಿಂ
C. ಹಾಡಿದನು
D. ಇಬ್ರಾಹಿಂ ಹಾಡನ್ನು -
‘ಬೆಳಕು’ ಈ ಪದದ ವಿರುದ್ಧ ಪದ.
A. ಬಳುಕು
B. ಕಟ್ಟಲು
C. ಕತ್ತಲು
D. ರಾತ್ರಿ -
‘ಸಿರಿ’ ಈ ಪದದ ಅರ್ಥ.
A. ಸಂಪತ್ತು
B. ಸಿರಿತನ
C. ಬಡತನ
D. ಶ್ರಮಿಕ -
“ಮೊದಲಿಗೆ ಅವರು ಕರ್ನಾಟಕದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಗೋಕಾಕ್ ಜಲಪಾತವನ್ನು ನೋಡಿದರು.” ಈ ವಾಕ್ಯದಲ್ಲಿರುವ ಸರ್ವನಾಮ ಪದ.
A. ಮೊದಲಿಗೆ
B. ಅವರು
C. ಕರ್ನಾಟಕದ
D. ಜಲಪಾತ -
ಈ ಪದದ ಸಂಧಿ ಹೆಸರಿಸಿ.
a. ವನವನ್ನು
b. ಮಾತಿಲ್ಲ
c. ದೇವಾಲಯ
d. ಮಹರ್ಷಿ
-
ಲೋಪ ಸಂಧಿ
-
ಆದೇಶ ಸಂಧಿ
-
ಆಗಮ ಸಂಧಿ
-
ಸವರ್ಣದೀರ್ಘ ಸಂಧಿ
-
ಗುಣ ಸಂಧಿ
A. a-5 b-4 c-2 d-1
B. a-3 b-5 c-4 d-2
C. a-3 b-1 c-4 d-5
D. a-2 b-3 c-1 d-4
-
‘ಬೆಟ್ಟದಾವರೆ’ ಎಂಬ ಪದವು ————— ಸಮಾಸಕ್ಕೆ ಉದಾಹರಣೆ ಆಗಿದೆ.
A. ಕ್ರಿಯಾ ಸಮಾಸ
B. ದ್ವಿಗು ಸಮಾಸ
C. ಕರ್ಮಧಾರೆಯ ಸಮಾಸ
D. ತತ್ಪುರುಷ ಸಮಾಸ -
‘ಶಾಲೆಯನ್ನು’ ಎಂಬ ಪದವು ದ್ವಿತೀಯಾ ವಿಭಕ್ತಿಯಾದರೆ ‘ಪ್ರಕೃತಿಯು’ ಎಂಬ ಪದವು ಈ ವಿಭಕ್ತಿಯಾಗಿದೆ.
A. ಪ್ರಥಮ
B. ಸಪ್ತಮಿ
C. ತೃತೀಯ
D. ಚತುರ್ಥಿ -
‘ನೀನು ನೀವು’ – ಮಧ್ಯಮ ಪುರುಷ ಸರ್ವನಾಮ. ‘ತಾನು ತನ್ನ’ – —————
A. ಪ್ರಥಮ ಪುರುಷ ಸರ್ವನಾಮ
B. ಪ್ರಶ್ನಾರ್ಥಕ ಸರ್ವನಾಮ
C. ಉತ್ತಮ ಪುರುಷ ಸರ್ವನಾಮ
D. ಆತ್ಮಾರ್ಥಕ ಸರ್ವನಾಮ -
‘ರಾಮನು ಮೈದಾನದಲ್ಲಿ ಆಟವಾಡುತ್ತಿದ್ದಾನೆ’ ಈ ವಾಕ್ಯದಲ್ಲಿರುವ ಧಾತು.
A. ರಾಮನು
B. ಮೈದಾನದಲ್ಲಿ
C. ಆಟವಾಡುತ್ತಿದ್ದಾನೆ
D. ಆಟ -
‘ಮನೆ – ಮನ’ ಈ ಪದಗಳ ಅರ್ಥವ್ಯತ್ಯಾಸಗಳ ಕ್ರಮ ಹೀಗಿವೆ.
A. ತಪ್ಪು – ಹಳೆಯದು
B. ಮಾತೇ – ಮಾಸು
C. ಒಪ್ಪಿಗೆ – ಹಾರ
D. ಗೃಹ – ಮನಸ್ಸು -
‘ಅತಿಯಾದ ಪ್ರೀತಿ’ ಪದದ ಸಮಾನಾರ್ಥಕ ಪದ —————
A. ಸಕ್ಕರೆ
B. ಶಾಶ್ವತ
C. ವ್ಯಾಮೋಹ
D. ಪ್ರಾಪ್ತಿ -
ಏಕಲವ್ಯನು ಕಾಡಿನಲ್ಲಿ ದೈರ್ಯದಿಂದ ಇದ್ದನು. ಈ ವಾಕ್ಯದಲ್ಲಿ ಗೆರೆ ಎಳೆದ ಪದವು __________ ವಾಚಕವಾಗಿದೆ.
A. ವಸ್ತು
B. ಗುಣ
C. ಪ್ರಮಾಣ
D. ದಿಗ್ವಾಚಕ -
ಕೆಳಗೆ ಕೊಟ್ಟಿರುವ ತತ್ಸಮ ತದ್ಭವಗಳ ಸರಿಯಾದ ರೂಪವನ್ನು ಗುರುತಿಸಿ.
A. ವರ್ಷ – ಹರ್ಷ
B. ಕಳಶ – ಗೋಪುರ
C. ಧ್ವನಿ – ದನಿ
D. ಶಿರ – ತಲೆ -
ಈ ಕೆಳಗಿನ ಪದಗಳಲ್ಲಿ ಗುಂಪಿಗೆ ಸೇರದ ಪದವನ್ನು ಗುರುತಿಸಿ.
A. ಪಟ ಪಟ
B. ಮನೆಮಠ
C. ಹಣ್ಣುಹಂಪಲು
D. ತಿಂಡಿ ತಿನಿಸು
ಸರಿಯಾದ ಉತ್ತರಗಳು (Answer Key)
-
A. ಬೆಂಗಳೂರು
-
B. ಹತ್ತು
-
C. ದ್ವಿತೀಯಾ
-
C. ಭೂತಕಾಲ
-
C. ಅನುನಾಸಿಕಗಳು
-
B. ದೊಡ್ಡ ದೊಡ್ಡ
-
C. ಹಾಡಿದನು
-
C. ಕತ್ತಲು
-
A. ಸಂಪತ್ತು
-
B. ಅವರು
-
C. a-3 b-1 c-4 d-5
-
D. ತತ್ಪುರುಷ ಸಮಾಸ
-
A. ಪ್ರಥಮ
-
D. ಆತ್ಮಾರ್ಥಕ ಸರ್ವನಾಮ
-
D. ಆಟ
-
D. ಗೃಹ – ಮನಸ್ಸು
-
C. ವ್ಯಾಮೋಹ
-
B. ಗುಣ
-
C. ಧ್ವನಿ – ದನಿ
-
A. ಪಟ ಪಟ