Telegram Join My Telegram WhatsApp Join My WhatsApp

8,9,10 ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಅಭ್ಯಾಸ ಗದ್ಯಾಂಶಗಳು 

8,9,10 ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಅಭ್ಯಾಸ ಗದ್ಯಾಂಶಗಳು 

1. ಈ ಕೆಳಗಿನ ಗದ್ಯಾಂಶವನ್ನು ಓದಿಕೊಂಡು ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(1 × 5 = 5)

ಪೊನ್ನ ರತ್ನತ್ರಯರಲ್ಲಿ ಒಬ್ಬ. ಈತನು ಕ್ರಿಸ್ತಶಕ 936 ರಿಂದ 998ರ ವರೆಗೆ ರಾಜ್ಯವಾಳಿದ ರಾಷ್ಟ್ರಕೂಟ ಚಕ್ರವರ್ತಿ ಮುಮ್ಮಡಿ ಕೃಷ್ಣನ ಆಸ್ಥಾನದಲ್ಲಿ ಪಂಡಿತನಾಗಿದ್ದನು. ಕನ್ನಡ ಮತ್ತು ಸಂಸ್ಕೃತಗಳೆರಡು ಭಾಷೆಯಲ್ಲಿಯೂ ಪಂಡಿತನಾಗಿದ್ದು, ಉಭಯ ಭಾಷಾ ಪಂಡಿತನೆಂಬ ಕೀರ್ತಿ ಪಡೆದಿದ್ದನು. ಈತ ಪಂಡಿತ ನಿಜ. ಆದರೆ ಅವನ ಕಾವ್ಯಗಳನ್ನು ಅಧ್ಯಯನ ಮಾಡಿದರೆ ಅವನಲ್ಲಿ ಪಂಡಿತನಲ್ಲಿರಬಹುದಾದ ಅಹಂಕಾರ ನಿರಸನ ಕಂಡುಬರುವುದಿಲ್ಲ. ಬಹುಶಃ ಇವನ ಕಾಲಕ್ಕೆ ಪಂಪನ ಕಾವ್ಯಗಳನ್ನು ಬಿಟ್ಟರೆ ಕನ್ನಡದಲ್ಲಿ ರಚನೆಯಾಗಿದ್ದ ಯಾವ ಗ್ರಂಥಗಳು ಲಭ್ಯವಾಗಿಲ್ಲದ್ದರಿಂದ ಕನ್ನಡದ ಹೆಚ್ಚು ಗ್ರಂಥಗಳನ್ನು ಅವಲೋಕನ ಮಾಡುವ ಅವಕಾಶ ಇವನಿಗೆ ದೊರೆಯಲಿಲ್ಲ.

ಈತ ಬರೆದ ಗ್ರಂಥಗಳು ಪ್ರಾಯಶಃ ನಾಲ್ಕು — ಶಾಂತಿಪುರಾಣ, ಭುವನೈಕ್ಯ ರಾಮಾಭ್ಯುದಯ, ಜೀನಾಕ್ಷರ ಮಾಲೆ ಮತ್ತು ಗತ ಪ್ರತ್ಯಾಗತ. ಇವುಗಳಲ್ಲಿ ನಮಗೆ ಲಭ್ಯವಿರುವ ಗ್ರಂಥಗಳು ಎರಡು — ಶಾಂತಿಪುರಾಣ ಮತ್ತು ಜೀನಾಕ್ಷರ ಮಾಲೆ. ಇನ್ನೆರಡು ಗ್ರಂಥಗಳು ಅಲಭ್ಯ. ಗತ ಪ್ರತ್ಯಾಗತ ಎಂಬುದು ಸಂಸ್ಕೃತದ ಗ್ರಂಥವಾಗಿರಬಹುದೆಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಜೀನಾಕ್ಷರ ಮಾಲೆ’ 39 ಕಂದ ಪದ್ಯಗಳಿಂದ ಕೂಡಿದ ಒಂದು ಪುಟ್ಟ ಗ್ರಂಥ. ಈ ಕಂದ ಪದ್ಯಗಳು ‘ಕ’ ಕಾರದಿಂದ ಪ್ರಾರಂಭವಾಗಿ ‘ಳ’ ಕಾರದಲ್ಲಿ ಕೊನೆಗೊಳ್ಳುತ್ತವೆ. ಇಲ್ಲಿ ಚಾತುರ್ಯ ಕಂಡು ಬರುತ್ತದೆಯೇ ಹೊರತು ಕಾವ್ಯ ಅಂಶವು ಅಷ್ಟಾಗಿ ಕಂಡು ಬರುವುದಿಲ್ಲವಾದರೂ ಪಾಂಡಿತ್ಯ ಪ್ರದರ್ಶನವಾಗಿದೆ.

ಭುವನೈಕ್ಯ ರಾಮಾಭ್ಯುದಯವೆಂಬ ಕಾವ್ಯವು ಒಂದು ಲೌಕಿಕ ಕಾವ್ಯವಾಗಿರಬೇಕು. ತನ್ನ ಪೋಷಕನನ್ನು ಶ್ರೀರಾಮನೊಡನೆ ಸಮೀಕರಿಸಿ ಕಾವ್ಯ ಬರೆದಿರುವಂತೆ ಕಂಡುಬರುತ್ತದೆ. ಪಂಪನು ಅರಿಕೇಸರಿಯನ್ನು ಮಹಾಭಾರತದ ಅರ್ಜುನೊಡನೆ ಸಮೀಕರಿಸಿ ವಿಕ್ರಮಾರ್ಜುನ ವಿಜಯವೆಂಬ ಹೆಸರಿನಲ್ಲಿ ಮಹಾಭಾರತದ ಕಥೆಯನ್ನು ಬರೆದಂತೆ, ಈತನು ಬರೆದಿರಬಹುದು ಎಂದು ತೋರುತ್ತದೆ. ಮುಮ್ಮಡಿ ಕೃಷ್ಣನ ಸಾಮಂತನಾಗಿದ್ದ ಶಂಕರ ಗಂಡನೆಂಬುವನಿಗೆ ಭುವನೈಕ್ಯ ರಾಮ ಎಂಬ ಬಿರುದು ಇತ್ತೆಂದು ಅವನನ್ನು ಕಥಾನಾಯಕನನ್ನಾಗಿ ಮಾಡಿಕೊಂಡು ಕಾವ್ಯವನ್ನು ಬರೆದಿರಬೇಕೆಂದು ಕೆಲವರು ಅಭಿಪ್ರಾಯ ಪಡುತ್ತಾರೆ ಎಂದು ಪಿ.ವಿ. ನಾರಾಯಣ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಶ್ನೆಗಳು :

  1. ಪೊನ್ನನ ಆಶ್ರಯದಾತ.
    A. ಒಂದನೇ ಕೃಷ್ಣ
    B. ಮುಮ್ಮಡಿ ಕೃಷ್ಣ
    C. ನೃಪತುಂಗ
    D. ಅರಿಕೇಸರಿ

  2. ಪೊನ್ನನ ಚಾತುರ್ಯವನ್ನು ಒಳಗೊಂಡ ಕೃತಿ ಇದು.
    A. ಶಾಂತಿಪುರಾಣ
    B. ಜೀನಾಕ್ಷರಮಾಲೆ
    C. ಗತ ಪ್ರತ್ಯಾಗತ
    D. ಭುವನೈಕ್ಯ ರಾಮಾಭ್ಯುದಯ

  3. ವಿಕ್ರಮಾರ್ಜುನ ವಿಜಯ ಕೃತಿಯ ಕರ್ತೃ.
    A. ಮುಮ್ಮಡಿ ಕೃಷ್ಣ
    B. ರನ್ನ
    C. ಪೊನ್ನ
    D. ಪಂಪ

  4. ಪೊನ್ನನು ಈ ಕೆಳಗಿನ ಯಾವ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದನು?
    A. ಕನ್ನಡ – ಸಂಸ್ಕೃತ
    B. ಕನ್ನಡ – ಪ್ರಾಕೃತ
    C. ಪ್ರಾಕೃತ – ಸಂಸ್ಕೃತ
    D. ಕನ್ನಡ – ಮರಾಠಿ

  5. ಪೊನ್ನನಿಗೆ ಲಭ್ಯವಿರುವ ಕೃತಿಗಳಿವು.
    A. ಭುವನೈಕ್ಯ ರಾಮಾಭ್ಯುದಯ
    B. ಗತ ಪ್ರತ್ಯಾಗತ
    C. ಶಾಂತಿಪುರಾಣ
    D. ಜೀನಾಕ್ಷರ ಮಾಲೆ

    A. C ಮಾತ್ರ ಸರಿ
    B. B ಮಾತ್ರ ಸರಿ
    C. C, D ಮಾತ್ರ ಸರಿ
    D. A ಮಾತ್ರ ಸರಿ


2. ಈ ಕೆಳಗಿನ ಗದ್ಯಾಂಶವನ್ನು ಓದಿಕೊಂಡು ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
(1 × 5 = 5)

ಸ್ವಚ್ಛ ಭಾರತ ಅಭಿಯಾನವು ಹಲವು ವರ್ಷ ಪೂರೈಸಿದೆ. ಆದರೆ ಈ ಅವಧಿಯಲ್ಲಿ ನಿಜಕ್ಕೂ ಸ್ವಚ್ಛತೆ ನಿಟ್ಟಿನಲ್ಲಿ ಗಮನಾರ್ಹ ಬದಲಾವಣೆ ಆಗಿದೆಯೇ ಎಂದು ಅವಲೋಕಿಸಿದರೆ ಜನರಲ್ಲಿ ಅರಿವು ಮೂಡುತ್ತಿರುವುದು ಹೌದು. ಸುಮಾರು 140 ಕೋಟಿ ಜನಸಂಖ್ಯೆಯ ದೇಶದಲ್ಲಿ ಪ್ರತಿ ಸ್ಥಳದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಆದರೆ ಜನರ ಸಹಭಾಗಿತ್ವ ಮುಖ್ಯ.

ಈ ನಿಟ್ಟಿನಲ್ಲಿ ಸರ್ಕಾರ ಜಾಗೃತಿ ಮೂಡಿಸುತ್ತಿದ್ದು, ಬದಲಾವಣೆಯನ್ನು ಕಾಣುತ್ತಿದೆ. ಆದರೂ ಕ್ರಮಿಸಬೇಕಾದದ್ದು ಸಾಕಷ್ಟಿದೆ. ಸ್ವಚ್ಛತೆ ಎಂಬುದು ಕೇವಲ ಆಚರಣೆ ಅಥವಾ ಕಾಟಾಚಾರವಾಗಬಾರದು; ಅದು ಸ್ವಭಾವವಾಗಿ ಬದಲಾದಾಗ ದೇಶದ ಚಿತ್ರಣವನ್ನೇ ಬದಲಾಯಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಶೌಚಗೃಹಗಳ ನಿರ್ಮಾಣವು ಆಂದೋಲನ ಮಾದರಿಯಲ್ಲಿ ನಡೆಯಬೇಕೆಂದು ಅವರು ಹೇಳಿದ್ದಾರೆ. ಪರಿಣಾಮವಾಗಿ ಸ್ವಚ್ಛತಾ ಅಭಿಯಾನ ದೇಶದ ಹಲವೆಡೆ ವಿಸ್ತರಣೆಯಾಗಿದೆ. ಸಮುದ್ರ ತೀರಗಳು ಮತ್ತು ಕಾಶಿಯ ಘಾಟ್‌ಗಳನ್ನು ಸ್ವಚ್ಛಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಸರ್ಕಾರೇತರ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಚಿತ್ರನಟ-ನಟಿಯರು ಮತ್ತು ಉದ್ಯಮಿಗಳು ಅಭಿಯಾನಕ್ಕೆ ಬೆಂಬಲ ನೀಡಿರುವುದು ಸ್ವಚ್ಛ ಭಾರತಕ್ಕೆ ಬಲ ನೀಡಿದೆ.

ಬಯಲು ಶೌಚ ಮುಕ್ತ ಪ್ರದೇಶಗಳು ತನ್ನಿಂದ ತಾನೇ ರೋಗಮುಕ್ತ ಪ್ರದೇಶಗಳಾಗುತ್ತವೆ. ವಿಶ್ವ ಆರೋಗ್ಯ ಸಂಸ್ಥೆ 2018ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಭಾರತ ಬಯಲು ಶೌಚ ಮುಕ್ತವಾದರೆ ಸುಮಾರು 3 ಲಕ್ಷ ಜನರ ಪ್ರಾಣ ಉಳಿಸಬಹುದು ಎಂದು ಹೇಳಿದೆ.

2014ರಲ್ಲಿ ಪ್ರಧಾನಿ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡುವಾಗ ಸ್ವಚ್ಛ ಭಾರತ ಯೋಜನೆಯನ್ನು ಘೋಷಿಸಿದರು. ಅಕ್ಟೋಬರ್ 2ರಂದು ಗಾಂಧೀಜಿ ಜಯಂತಿಯಂದು ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಪ್ರಶ್ನೆಗಳು :

  1. ಸ್ವಚ್ಛ ಭಾರತ ಅಭಿಯಾನ ———- ವರ್ಷ ಪೂರೈಸಿದೆ.
    A. ತುಂಬಾ
    B. ಹಲವು
    C. ಮೂರು
    D. ಒಂದು

  2. ಸ್ವಚ್ಛ ಭಾರತ ಯೋಜನೆಯನ್ನು ಘೋಷಣೆ ಮಾಡಿದವರು.
    A. ಅಬ್ದುಲ್ ಕಲಾಂ
    B. ನರೇಂದ್ರ ಮೋದಿ
    C. ಮಹಾತ್ಮ ಗಾಂಧಿ
    D. ವಿಶ್ವಸಂಸ್ಥೆ

  3. ಹೇಳಿಕೆ – 1 : ಸ್ವಚ್ಛತೆ ಹವಾಮಾನದ ಮೇಲೆ ಅಷ್ಟೇನೂ ಪರಿಣಾಮ ಬೀರಲಾರದು.
    ಹೇಳಿಕೆ – 2 : ಬಯಲು ಶೌಚ ಮುಕ್ತ ಪ್ರದೇಶಗಳು ತನ್ನಿಂದ ತಾನೇ ರೋಗಮುಕ್ತ ಪ್ರದೇಶಗಳಾಗುತ್ತದೆ.

    A. ಮೇಲಿನ ಎರಡು ಹೇಳಿಕೆಗಳು ಸರಿಯಾಗಿದೆ
    B. ಮೊದಲ ಹೇಳಿಕೆ ಸರಿ, ಎರಡನೇ ಹೇಳಿಕೆ ತಪ್ಪು
    C. ಮೊದಲ ಹೇಳಿಕೆ ತಪ್ಪು, ಎರಡನೇ ಹೇಳಿಕೆ ಸರಿ
    D. ಮೇಲಿನ ಎರಡು ಹೇಳಿಕೆಗಳು ತಪ್ಪು

  4. ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಿರುವವರು.
    A. ಕೇಂದ್ರ ಸರ್ಕಾರ
    B. ರಾಜ್ಯ ಸರ್ಕಾರ
    C. ಸರ್ಕಾರೇತರ ಸಂಸ್ಥೆಗಳು, ಉದ್ಯಮಿಗಳು, ಚಿತ್ರನಟ-ನಟಿಯರು
    D. ಮೇಲಿನ ಎಲ್ಲವೂ

  5. ಸ್ವಚ್ಛತೆ ಎಂಬುದು ಕೇವಲ ಆಚರಣೆ ಅಥವಾ ಕಾಟಾಚಾರವಾಗಬಾರದು. ಅದು ———————– ದೇಶದ ಚಿತ್ರಣವನ್ನೇ ಬದಲಾಯಿಸಬಹುದು.

    A. ಈಡೇರಿದಾಗ
    B. ಸ್ವಭಾವವಾಗಿ ಬದಲಾದಾಗ
    C. ನಮ್ಮ ಭಾರತದ
    D. ಆಚರಣೆ ಮಾಡಿದಾಗ